Friday 13 November 2015

ಕನ್ನಡವನ್ನು ಬೆಳೆಸುವುದು ಹೇಗೆ?



ಕನ್ನಡ, ಸುಮಾರು ೨ ಸಾವಿರ ವರ್ಷ ಇತಿಹಾಸ ಇರುವ ಭಾಷೆ ! ಗ್ರೀಕ್ ಪ್ರಾಚೀನ ಕಲೆ ಗಳಲ್ಲಿ ಕನ್ನಡ ಭಾಷೆಯ ಉಲ್ಲೇಕ ಇದೆ, ಇಂಗ್ಲಿಶ್ ಬರಹಗಾರ ಜೋರ್ಜೆ ಕಿಟೆಲ್ ಆಸಕ್ತಿ ತೋರಿಸಿದ್ದು ಕೇವಲ ಒಂದೇ ಭಾಷೆಯಲ್ಲಿ ಅದು ಕನ್ನಡ! ಅಮೋಘವರ್ಷ "ಕವಿರಾಜ ಮಾರ್ಗ" ಬರೆದಾಗ ಅಂಗ್ಲ ಭಾಷೆ ಇನ್ನು ಹಸುಗೂಸು. ವಿಕಿಪೀಡಿಯ ಲೋಗೋದಲ್ಲಿ ಕಾಣುವ ಭಾರತದ ಒಂದೇ ಭಾಷೆ "ಕನ್ನಡ". ವಿನೂಭಭಾವೆ ಕೊಂಡಾಡಿದ ಭಾಷೆ ಕನ್ನಡ ಹೀಗೆ ಕನ್ನಡ ಭಾಷೆ ಹಿಂದಿರುವ ಸತ್ಯ ಭಾಹಳಷ್ಟು !!
ಇಂತಹ ಕನ್ನಡ ಭಾಷೆ ರಾಜ್ಯಾಧ ರಾಜಧಾನಿಯಲ್ಲಿಯೇ ಅತೀ ಕಡಿಮೆ ಬಳಕೆಯಲ್ಲಿದೆ. " ಯನ್ನಡಾ, ಎಕ್ಕಡಾ, ಮದ್ಯದಲಿ ಅಲ್ಪ ಸ್ವಲ್ಪ ಕನ್ನಡ " ಎಂದು ರಿಚರ್ಡ್ ಲೂಇಸ್ ಹಾಸ್ಯ ಚಟಾಕಿ ಹಾರಿಸುತ್ತಾರೆ. ಹಾಗಾದಲ್ಲಿ ಕನ್ನಡ ಭಾಷೆ ಕಡಿಮೆ ಬಳಕೆಯಲ್ಲಿ ಇರುವುದಕ್ಕೆ ಕಾರಣ ಏನು ?

೧. ಇಂಗ್ಲಿಷ್ ಭಾಷೆ "ಜಾಗಾತಿಕ ಭಾಷೆ " ಯಾಗಿದ್ದು . (ಕನ್ನದಡಿಗರು, ಇಂಗ್ಲಿಷ್ ರಂತೆ ದಂಡೆತ್ತಿ ಹೋಗಿದ್ದಾರೆ ಪ್ರಾಯಶಃ ಕನ್ನಡ ಜಾಗತಿಕ ಭಾಷೆ ಆಗುತ್ತಿತ್ತ್ತ್ಹೋ ಏನೋ !!, ಆದರೆ ಕನ್ನದಡಿಗರು ಶಾಂತಿ ಪ್ರಿಯರು ).
೨. ಕನ್ನಡಿಗರ flexible ಗುಣ !
ಬೆಂಗಳೂರಿನ ಕನ್ನದಡಿಗ ತಮಿಳು , ತೆಲಗು , ಹಿಂದಿ, ಮಲಯಾಳ ಹೀಗೆ ಯಾವುದೇ ಭಾಷೆ ಆಡ ಬಲ್ಲ! ಬೆಂಗಳೂರಿನ ಕನ್ನಡಿಗ ತನ್ನ ಯದಿರು ನಿತ್ತಿರುವವನ ಭಾಷೆಗೆ ಸರಿಯಾಗಿ ಅದೇ ಭಾಷೆಯಲ್ಲಿ ಉತ್ತರಿಸ ಬಲ್ಲ . ಬೇರೆ ಭಾಷಿಗರಿಗೆ ಕನ್ನಡ ಕರಿಯಲು Force ಮಾಡದಿರುವ ಸದ್ರುದಯ ಅದು. ಕನ್ನಡಿಗರ ಈ flexible ಗುಣ ಇಂಗ್ಲಿಷ್ ಬಲಿಸಲು ಅವನನ್ನೇ ಅನುಗೊಣಿಸುತ್ತದೆ. ಕೆಲ ಕನ್ನಡಿಗರಿಗೆ ಭಾಷೆಯ ಮೇಲೆ ತಿರಸ್ಕಾರ ಹುಟ್ಟಿದೆ ಅದು ಕಾನ್ನಡ ಭಾಷೆಯ ಸೊಗಡಿನ ಅರಿವಿಲ್ಲದೆ !!

ಕನ್ನಡ ಬಾಷೆ ಬೆಳಸುವುದು ಹೇಗೆ ?

ಕರ್ನಾಟಕದ ಕನ್ನಡೇತರ ಜನಗಳು ಕನ್ನಡ ನಾಡು ಮತ್ತು ಸಂಸ್ಕೃತಿ ಯನ್ನು ಕೊಂಡಾಡುತ್ತಾರೆ. ಆದರೆ ಕನ್ನಡ ಭಾಷೆ ಕಲಿಯುವ ಗೋಜಿಗೆ ಹೊಗುವು ದಿಲ್ಲ !! ಕನ್ನಡಿಗರು "Reverse Engineering" ಕೆಲಸ ಈ ವಿಚಾರದಲ್ಲಿ ನೆಡಸಲೀ ಬೇಕು !! ಅಂದರೆ ಕನ್ನಡೇತರ ಕರ್ನಾಟಕ ದವರಿಗೆ ಕನ್ನಡ ಸಂಸ್ಕೃತಿಯ ಸೊಗಡನ್ನು ಸವಿಯಲು ಕನ್ನಡ ಬಾಷೆ ಎಷ್ಟು ಮುಖ್ಯ ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕು !
ಉದಾಹರಣೆಗೆ: ಕನ್ನಡಿಗರ ಪಂಚೆ ಉಡುವ ಶೈಲಿಯನ್ನು ಮೆಚ್ಚಿ ಅದನ್ನು ಅನುಕರಿಸುವ ಅನೇಕರಿದ್ದಾರೆ. ಆದರೆ ಕನ್ನಡಿಗರ ಆ ಶೈಲಿಗೆ ಕಾರಣ ಏನು ?! ಅದರ ಪರಂಪರೆ ಏನು?! ಹೀಗೆ ಕನ್ನಡದ ಸಮೃದ್ಧ ಸಂಸ್ಕೃತಿಯನ್ನು ಮನ ದಟ್ಟು ಮಾಡಿಕೊಟ್ಟು ! ಬೇರೆ ಭಾಷಿಗರು ಕನ್ನಡಿಗರನ್ನು 'ಅನುಕರಿಸುವುದಲ್ಲ' , 'ಅನುಸರಿಸುವಂತೆ' ಮಾಡಬೇಕು !! ಕನ್ನಡದಲ್ಲಿ ಪ್ರಪಂಚ ಮೆಚ್ಚುವಂತಹ contents ಮತ್ತು ಅಂಶಗಲಿದೆ ಆದರೆ ಅದನ್ನು ಅನ್ಯ ಬಾಶಿಗರಿಗೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು. ಕನ್ನಡ ಭಾಷೆ ಬಳಸುವುದು ನನ್ನ "ಗರ್ವ' ಎಂಬ ಭಾವನೆ ವ್ಯಕ್ತಿಯಲ್ಲಿ ಮೂಡಿದಲ್ಲಿ ಕನ್ನಡದ ಬಳಕೆ ತನ್ಮೂಲಕ ಅದರ ಬೆಳ ವಣಿಗೆ ಸುಲಭ !!

ಇದಲ್ಲದೆ Technology ಕ್ಷೇತ್ರದಲ್ಲಿ ಕನ್ನಡದ ಉಪಯೋಗ ಮುಖ್ಯ! ಕನ್ನಡದಲ್ಲಿ ತಂತ್ರಾಂಶ (Software) ಅಭಿ ವೃದ್ಧಿ ! "ಭರಹ ಕನ್ನಡ" "ನುಡಿಕನ್ನಡ" ಇಂತಹ software ಗಳಿಗೆ ಉದಾಹರಣೆ ! ಬೆಂಗಳೂರಿನ ಕೆಲವು ಟೆಕ್ಕಿ ಗಳು ಸೇರಿ ಶಿವರಾಜ್ ಕುಮಾರ್ ರ "ಓಂ' ಚಿತ್ರದ ಕತಾ ವಸ್ತುವನ್ನು ಹಿಡಿದು "ಟೆಂಪಲ್ ರನ್ "ನಂತಹ android app ಗೇಮ್ ತಯಾರಿಸಿದ್ದಾರೆ !! ಕನ್ನಡದಲ್ಲಿ "bhagavatgeete" app ಕೂಡ ಬಂದಿದೆ ! 'ಸ್ಟಾರ್ಟ್ ಅಪ್' ಗಳ ತವರಾಗಿರುವ ಬೆಂಗಳೂರು ಕನ್ನಡಕ್ಕೆ ಅದರದೇ ಆದ ಬೆಲೆ ಕೊಟ್ಟಲ್ಲಿ ! ಕನ್ನಡ ಜಾಗತೀಕ ಭಾಷೆಯೇ ಆಗಿ ಹೋಗುತ್ತದೆ ! ಇದಕ್ಕೊಂದು ಉದಾಹರಣೆ ಈ ಲಿಂಕ್ ನಲ್ಲಿ ಇದೆ --.

ಕನ್ನಡಿಗ ನೊಬ್ಬ ಬೇರೆ ರಾಜ್ಯಕ್ಕೆ ಹೋದರೆ ಆತ ೨ ವರ್ಷ ದೊಳಗೆ ಅಲ್ಲಿನ ಭಾಷೆ ಕಲಿತು ಅಲ್ಲಿನ ಪ್ರಾಂತ್ಯದವನೇ ಆಗುತ್ತಾನೆ.. ಆದರೆ ಕರ್ನಾಟಕಕ್ಕೆ ಬಂದ ಇತರ ಭಾಷಿಗರು ವರ್ಷ ಗಳು ಉರುಳಿದರು ಕನ್ನಡ ಕಲಿಯುವುದಿಲ್ಲ . ಕನ್ನಡಿಗರ ಹೃದಯ ಸಹಿಷ್ಣುತೆ ಅದು. ಅದು ಕನ್ನಡ ಭಾಷೆ ಮತ್ತು ಸಂಸ್ಕೃತಿ ಇಂದ ಬಂದಿದ್ದು ! ಕನ್ನಡ ಬೆಳೆಸಲು ಇನ್ನೊಂದಿಷ್ಟು ಮಾರ್ಗ -

ಮೊಬೈಲ್ helpline ಅಥವಾ customer care ಸಿಬ್ಬಂದಿ ಒಂದಿಗೆ ಕನ್ನಡದಲ್ಲಿ ಮಾತಾ ನಾಡುವುದು!
ATM ನಲ್ಲಿ ಕನ್ನಡ ಬಳಕೆ
wats app ನಲ್ಲಿ ಕನ್ನಡ ಬಳಕೆ
google search ನಲ್ಲಿ ಕನ್ನಡ !

ಬೆಂಗಳೂರಿನ ಒಂದಿಷ್ಟು ಹುಡುಗರು ಸೇರಿ wats-app group ಮಾಡಿ ಕನ್ನಡ ಕಲಿಸುತ್ತಿದ್ದರಂತೆ !! ನಾವೂ ಇಂತಹ ಕೆಲಸ ಗಳಿಗೆ ಕೈ ಹಾಕೊಣ! ಕುವೆಂಪು ಅವರ ಒಂದು ಮಾತು ಇಲ್ಲಿ ಹೇಳಲೀ ಬೇಕು "ಕನ್ನಡಕ್ಕಾಗಿ ಕೈ ಎತ್ತು , ನಿನ್ನ ಕೈ ಕಲ್ಪವೃಕ್ಷ ವಾಗುವು ದು"
ಸಿರೀಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ !
'